ಸಾಲುಗಳು
ಡಾ. ಜಿ. ಕೃಷ್ಣ
ಬರೇ
ನೋವಿನ ರೊಟ್ಟಿ
ಕಣ್ಣೀರು ಸೇರಿ
ಬಲು ಮೆದು
ತಿನ್ನುವಾಗ ಶಬ್ಧವೇ ಇಲ್ಲ
ಅಪಮಾನ ಸೇರಿದರೆ ಖಡಕ್ಕು
ಅಗಿಯುವ ಶಬ್ಧದ ಜೊತೆ
ಹಲ್ಲು ಕಡಿಯುವ ಶಬ್ಧ
ನಿಶ್ಶಬ್ಧವೊ ಸಶಬ್ಧವೋ
ರುಚಿ ಎದೆಹೊಕ್ಕು
ಜೀವಕೋಶಕ್ಕೆ
ಶಕ್ತಿ ಇಳಿಯಬೇಕು
ಹರಡಿಕೊಂಡು ತಂಪಾಗಬೇಕು
ಕಾದು
ಗೆಲ್ಲಬೇಕು
-ಲಾಂಗ್ ಷ್ಟನ್ ಹ್ಯೂಸನ 'ದಂಗೆ'ಯಿಂದ ಪ್ರೇರಿತ
ನೋವಿನ ರೊಟ್ಟಿ
ಕಣ್ಣೀರು ಸೇರಿ
ಬಲು ಮೆದು
ತಿನ್ನುವಾಗ ಶಬ್ಧವೇ ಇಲ್ಲ
ಅಪಮಾನ ಸೇರಿದರೆ ಖಡಕ್ಕು
ಅಗಿಯುವ ಶಬ್ಧದ ಜೊತೆ
ಹಲ್ಲು ಕಡಿಯುವ ಶಬ್ಧ
ನಿಶ್ಶಬ್ಧವೊ ಸಶಬ್ಧವೋ
ರುಚಿ ಎದೆಹೊಕ್ಕು
ಜೀವಕೋಶಕ್ಕೆ
ಶಕ್ತಿ ಇಳಿಯಬೇಕು
ಹರಡಿಕೊಂಡು ತಂಪಾಗಬೇಕು
ಕಾದು
ಗೆಲ್ಲಬೇಕು
-ಲಾಂಗ್ ಷ್ಟನ್ ಹ್ಯೂಸನ 'ದಂಗೆ'ಯಿಂದ ಪ್ರೇರಿತ
ಮೌನ ನದಿಯಲ್ಲಿ
ಮಾತಿನ ದೋಣಿ
ತೂತು ಬಿದ್ದಿದೆ
ತಳದ ಹಾವಸೆ ಏಡಿ
ಮೀನು ಮೊಸಳೆಗಳ ಮರೆಸುವ
ಹಂಸೆಗಾಗಿ
ಕಾಯಬೇಕಿದೆ
ಮಾತಿನ ದೋಣಿ
ತೂತು ಬಿದ್ದಿದೆ
ತಳದ ಹಾವಸೆ ಏಡಿ
ಮೀನು ಮೊಸಳೆಗಳ ಮರೆಸುವ
ಹಂಸೆಗಾಗಿ
ಕಾಯಬೇಕಿದೆ
ಒಂದು ನೂರು ಮಿಲಿಯಕ್ಕೆ ಎಷ್ಟು ಸೊನ್ನೆಯೋ
ರೈತನ ಮಗ
ಮಿಖಾಯಿಲ್ ಕಲಾಶ್ನಿಕೋವ್
ನಿನ್ನೆ ಸೋಮವಾರ
ಗುಂಡುಗಿಂಡಿಗೆ ಬಲಿಯಾಗದೆ
ತೊಂಭತ್ನಾಲ್ಕರಲ್ಲಿ
ಶಾಂತವಾಗಿ ಸತ್ತನಂತೆ
ಅವನ ಮಕ್ಕಳೇ ನೋಡಿ
ವಿಷ ಕುಡಿಯುತ್ತಿದ್ದರೂ
ಅಜರಾಮರರು
ಅತಿ ನಿಖರ
ಎ ಕೆ 47ನ್ನಿನ ಜನಕನ
ಆತ್ಮಕ್ಕೆ ಶಾಂತಿ ಸಿಗಲಿ
ಕಲಾಶ್ನಿಕೋವಿಗೆ ಎದೆಯೊಡ್ಡಿದವರ
ಒಡ್ಡುವವರ ಆತ್ಮಕ್ಕೂ....
ರೈತನ ಮಗ
ಮಿಖಾಯಿಲ್ ಕಲಾಶ್ನಿಕೋವ್
ನಿನ್ನೆ ಸೋಮವಾರ
ಗುಂಡುಗಿಂಡಿಗೆ ಬಲಿಯಾಗದೆ
ತೊಂಭತ್ನಾಲ್ಕರಲ್ಲಿ
ಶಾಂತವಾಗಿ ಸತ್ತನಂತೆ
ಅವನ ಮಕ್ಕಳೇ ನೋಡಿ
ವಿಷ ಕುಡಿಯುತ್ತಿದ್ದರೂ
ಅಜರಾಮರರು
ಅತಿ ನಿಖರ
ಎ ಕೆ 47ನ್ನಿನ ಜನಕನ
ಆತ್ಮಕ್ಕೆ ಶಾಂತಿ ಸಿಗಲಿ
ಕಲಾಶ್ನಿಕೋವಿಗೆ ಎದೆಯೊಡ್ಡಿದವರ
ಒಡ್ಡುವವರ ಆತ್ಮಕ್ಕೂ....
ಸಾವಿರ ಕಣ್ಣಿನ ನವಿಲು
ಹೇಳಿತು-
ಪೊದೆಗಳಿಗೆ ಸಿಕ್ಕು
ಒಂದೆರಡು ಗರಿ
ಉದುರಿದರೂ ಚಿಂತಿಲ್ಲ
ಬೇಡ
ರಾಜಮಾರ್ಗ
ಹೇಳಿತು-
ಪೊದೆಗಳಿಗೆ ಸಿಕ್ಕು
ಒಂದೆರಡು ಗರಿ
ಉದುರಿದರೂ ಚಿಂತಿಲ್ಲ
ಬೇಡ
ರಾಜಮಾರ್ಗ
ಬೆಚ್ಚಗೆ ಕೂತ ಹೊಗಳಿಕೆಗಳೆಲ್ಲ
ಒಂದು ಸಣ್ಣ ಅವಮಾನಕ್ಕೆ
ಮರಗಟ್ಟಿ
ಮರೆತೇ ಹೋಗುತ್ತವಲ್ಲ ಗಾಲಿಬ್,
ಅಖಂಡ ಮೃದುತ್ತ್ವದ ಜೊಂಪಿನಲ್ಲಿ
ಅಕಾರಣವಾಗಿ ಸೇರಿಕೊಂಡ
ಒಂದು ಕಾಠಿಣ್ಯದ ಹರಳೂ
ಚುಚ್ಚಿ ಎಬ್ಬಿಸುತ್ತದಲ್ಲ
ಇದು ಮೇಲರಿಮೆ ಕಳಚಿದಾಗಿನ
ಬೆತ್ತಲೆ-
ಯಲ್ಲದೆ ಮತ್ತೇನೂ ಅಲ್ಲ
ಒಂದು ಸಣ್ಣ ಅವಮಾನಕ್ಕೆ
ಮರಗಟ್ಟಿ
ಮರೆತೇ ಹೋಗುತ್ತವಲ್ಲ ಗಾಲಿಬ್,
ಅಖಂಡ ಮೃದುತ್ತ್ವದ ಜೊಂಪಿನಲ್ಲಿ
ಅಕಾರಣವಾಗಿ ಸೇರಿಕೊಂಡ
ಒಂದು ಕಾಠಿಣ್ಯದ ಹರಳೂ
ಚುಚ್ಚಿ ಎಬ್ಬಿಸುತ್ತದಲ್ಲ
ಇದು ಮೇಲರಿಮೆ ಕಳಚಿದಾಗಿನ
ಬೆತ್ತಲೆ-
ಯಲ್ಲದೆ ಮತ್ತೇನೂ ಅಲ್ಲ
ಶೂನ್ಯ
ಹಂಚ
ಹಂಚ
ತುಂಬಿದಷ್ಟು ಸಲೀಸಾಗಿ
ಯಾವುದನ್ನೂ
ಕೃಪಣ ಸಮೃದ್ಧಿ
ತುಂಬಲಿಲ್ಲ
ಯುದ್ಧ ಮುಗಿದ ಎಷ್ಟೋ ವರ್ಷಗಳ ಮೇಲೆ
ಯುದ್ಧಕೈದಿಗಳೆಲ್ಲ
ಸತ್ತ ಮೇಲೆ
ಶಾಂತಿ ಸಂದೇಶ ಬಂತು
ಬಿಳಿ ಪಾರಿವಾಳಗಳ
ಹಾರಿಬಿಟ್ಟೆವು
ಯುದ್ಧಕೈದಿಗಳೆಲ್ಲ
ಸತ್ತ ಮೇಲೆ
ಶಾಂತಿ ಸಂದೇಶ ಬಂತು
ಬಿಳಿ ಪಾರಿವಾಳಗಳ
ಹಾರಿಬಿಟ್ಟೆವು
ಕವನ-
ವೆಂದರೇನೆಂದು
ವೆಂದರೇನೆಂದು
ಮತ್ತೇನೂ
ಹೇಳಲಾರೆ
ಮುಖವಾಡ ಕಂಡಕೂಡಲೇ
ಒಂದಂತೂ ಖಾತ್ರಿಯಾಯಿತು
ಅದರ ಹಿಂದೊಂದು
ಮುಖವಿದೆ
ಒಂದಂತೂ ಖಾತ್ರಿಯಾಯಿತು
ಅದರ ಹಿಂದೊಂದು
ಮುಖವಿದೆ
ಪರಾಕಾಷ್ಟೆ ಮುಟ್ಟಿದ
ಪ್ರೇಮ ಭಕ್ತಿ
ಮಧು ಮೈಥುನ
ಅನುಭವದ ಮಿತಿ-
ಗೆ
ಬಂಧಿ
ಪ್ರೇಮ ಭಕ್ತಿ
ಮಧು ಮೈಥುನ
ಅನುಭವದ ಮಿತಿ-
ಗೆ
ಬಂಧಿ
ಉತ್ತರದ ದರ್ದಿಲ್ಲದ ಪ್ರಶ್ನೆಗಳು
ಪ್ರಶ್ನೆಗಳಿಲ್ಲದ ಉತ್ತರಗಳು
ನಿರಮ್ಮಳವಾಗಿ
ಸುಖಿಸುತ್ತವೆ
ಪ್ರಶ್ನೆಗಳಿಲ್ಲದ ಉತ್ತರಗಳು
ನಿರಮ್ಮಳವಾಗಿ
ಸುಖಿಸುತ್ತವೆ
***
No comments:
Post a Comment