Monday 18 November 2013

ಕವಿತೆ: ಮುಖವಾಡ: ರಮೇಶ್ ಮೇಗರವಳ್ಳಿ


 

 


ಶ್ರೀ ರಾಮಚ೦ದ್ರನ೦ತಹ ಮನುಷ್ಯ
ಎನ್ನುತ್ತಾರೆ ಜನ ನನ್ನನ್ನು!
ನಾನೂ ಅಷ್ಟೆ
ಶ್ರೀ ರಾಮಚ೦ದ್ರನ ಹಾಗೇ ಇರುತ್ತೇನೆ
ಅವರೆಲ್ಲರೆದುರಿಗೆ.
ಆದರೆ
ನನ್ನೊಳಗಿನ ನ೦ದನದ
ಬಳ್ಳಿ ಮಾಡದಲ್ಲೊಬ್ಬ ಕೃಷ್ಣ
ಕೊಳಲೂದುತ್ತಾ
ಕಾಯುತ್ತಿದ್ದಾನೆ
ಗೊಪಿಕೆಯರಿಗಾಗಿ!

ಹಸುವಿನ೦ತಹ ಮನುಷ್ಯ
ಎನ್ನುತ್ತಾರೆ ಜನ ನನ್ನನ್ನು.
ನಾನೂ ಅಷ್ಟೆ 
ಹಸುವಿನ ಹಾಗೇ ಇರುತ್ತೇನೆ
ಅವರೆಲ್ಲರೆದುರಿಗೆ!
ಆದರೆ
ನನ್ನೊಳಗಿನ ಪ೦ಜರದಲ್ಲಿ
ಕೆ೦ಗಣ್ಣು, ಮೀಸೆ, ಕೋರೆದಾಡೆಗಳ
ಹುಲಿಯೊ೦ದು ಘರ್ಜಿಸುತ್ತಾ
ಅತ್ತಿತ್ತ ತಿರುಗುತ್ತಾ
ಚಡಪಡಿಸುತ್ತಿದೆ
ಬಿಡುಗಡೆಗಾಗಿ!

ಸಮಾಜ
ತೊಡಿಸಿ ಬಿಟ್ಟಿದೆ
ಒಬ್ಬೊಬ್ಬರಿಗೆ ಒ೦ದೊ೦ದು
ಮುಖವಾಡ!



***

No comments:

Post a Comment