ಸ್ಮಶಾನದಲ್ಲೊಂದು ಹೂವು ಸದ್ದಿಲ್ಲದೇ ಅರಳಿದೆ
ಅದನ್ನು ಎತ್ತಿ ಮುಡಿಗೇರಿಸಿಕೊಂಡು ನಾನು ಅರಳಿದೆ
ವಂಚನೆಗೆ ಒಳಗಾದ ಹೂವೊಂದು ಹೊಸಕಿ ಹೊಸಕಿ ಹಾಕಲ್ಪಟ್ಟಿದೆ
ಅದರ ಗಂಧ ಪೂಸಿಕೊಂಡು ನಾನು ಅರಳಿದೆ
ತನ್ನದೇ ಗಿಡಗಳ ಮುಳ್ಳು ಚುಚ್ಚಿ ಹೂವು ಗಾಯಗೊಂಡಿದೆ
ಪ್ರೀತಿ ಮುಲಾಮು ಹಚ್ಚಿ ಎದೆಗೊತ್ತಿಕೊಂಡು ನಾನು ಅರಳಿದೆ
ಕಾಲದ ತುಳಿತಕ್ಕೆ ಒಳಗಾಗಿ ಹೂವು ನಲುಗಿದೆ
ಅದನ್ನು ನೇವರಿಸಿ ಮುಡಿದುಕೊಂಡು ನಾನು ಅರಳಿದೆ
ಅಪವಾದ ನಿಂದನೆಯ ಧೂಳಿನಿಂದ ಹೂವು ಮಲಿನವಾಗಿದೆ
ಕಂಗಳ ಹೇಮಹನಿಗಳಿಂದ ತೊಳೆದುಕೊಂಡು ನಾನು ಅರಳಿದೆ
***
No comments:
Post a Comment