ಸಾರ್ಥಕ ಹಸಿವು
ಒಂದು ನಶೆಯೇರಿಸುವ ನೋವು
ಮನಸು ಹೃದಯಗಳ
ಕನ್ನಡಿ ಚೂರುಗಳಂತೆ ಒಡೆಯುತಿದೆ,
ತನ್ನದೇ ವಿಕಾರಗಳ ಚಿಂತಿಸಿದೆ.
ಚಿತ್ರಗಾರನ ಕುಂಚ
ಹೋರಾಡುತಿದೆ ಅರ್ಥವ ಬರೆಯಲು
ಹಾಳಾದ ಬಣ್ಣಗಳು, ಅನುಪಯುಕ್ತ ಭಿತ್ತಿಗಳು
ಮತ್ತು ಕೊನೆಗೆ ಸೃಷ್ಟಿಕರ್ತ ಮಾತ್ರ ಅರಿಯುವ ಚಿತ್ರ.
ಒಂದು ನಂಜಾದ ರಾಗ
ಹೃದಯವ ನಾಶಮಾಡುತಿರಲು
ಶೃತಿಯಾಗದ ಆತ್ಮ ಪ್ರಯಾಸಪಡುತಿದೆ ನೆನೆದು
ಪದಗಳಿಂದ ರಂಗಾದ ಹಾಡು ಕಟ್ಟಲು.
ಎಲ್ಲವೂ ಕೈಯಳತೆಯಲ್ಲಿದ್ದಂತೆ ಭಾಸ
ಒಂದು ಕ್ಷಣ, ಕವಿ ಗರ್ವ ಪಡುವಳು
ಚದುರಿದ ಚಿಂತನೆಗಳಿಗೆ ಭಾಷೆ ಹುಡುಕಿದಕ್ಕೆ
ಭಾವನೆಗಳ ಚಿತ್ರಿಸಿ
ಪ್ರೀತಿಯ ಶೃತಿಹಿಡಿದಿದ್ದಕ್ಕೆ.
ಮರು ಘಳಿಗೆ, ಎಲ್ಲವು ಖಾಲಿ
ಮೂಲ ಕಲ್ಪನೆಗೆ ಸಂಬಂಧವಿರದಂತೆ
ಕೆಲವು ಚೆದುರಿದ ದೂರಗಳು ಮಂಕಾಗಿಸಿವೆ ಪ್ರಿಯ ಮಹಲನು,
ಶಿಲ್ಪಿಯನು ತೊಳಲಾಟದಿ ಬಿಟ್ಟು .
ಒಟ್ಟಾಗಿಸಿದಾಗ ಶಬ್ದಗಳ ಬಲಹೀನತೆಯೇ ಇದು ?
ಅಥವಾ ಆಲೋಚನೆಗಳ ಭಂಗುರತೆ ಮಾತ್ರವೆ ?
ಅಭಿವ್ಯಕ್ತಿ ಭಾಷಾಂತರಗೊಳ್ಳಲಾರದೆ ?
ಅಥವಾ ಪದ್ಯಗಳಿಗೆ ದನಿಯಿಲ್ಲವೆ ಸರಿಮಾಡಲು?
ಭೂಮಿ ಹುಟ್ಟಿದಂದಿನಿಂದ
ಆಕಾಶ ಈ ಒಗಟ ಬಿಡಿಸಲು ತವಕಿಸಿದೆ.
ಅನುವಾದ: ಬೆನಕ ಕುಂಬಾರ್
No comments:
Post a Comment