ಡಾ.ಸಿ ರವೀಂದ್ರನಾಥ್ ಬಳ್ಳಾರಿ ವೈದ್ಯಕೀಯ ಕಾಲೇಜಿನಲ್ಲಿ ನನ್ನ ಸಹಪಾಠಿ. ಆಪ್ತ ಗೆಳೆಯ. ಹಾಯ್ಕುಗಳ ಹುಚ್ಚು ಹಿಡಿಸಿಕೊಂಡವನು. ಈಗ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೂಕ್ಷ್ಮಾಣುಜೀವಿ ಶಾಸ್ತ್ರಜ್ಞ. ಇದಕ್ಕೂ ಇವನು ಸೂಕ್ಷ್ಮವಾದ ಹಾಯ್ಕುಗಳನ್ನು ಬರೆಯುತ್ತಿರುವುದಕ್ಕೂ ಸಂಬಂಧವಿರಲಾರದು! ಕೆಲವೇ ಶಬ್ಧದಲ್ಲಿ ದೊಡ್ಡದು ಹೊಳೆದಾಗಿನ ಖುಶಿಯೇ ಬೇರೆ. ಅದನ್ನು ಹೊಳೆಯಿಸುವ ಕಲೆ ರವೀಂದ್ರನಾಥ್ ಗೆ ಸಿದ್ಧಿಸಿದೆ. ರವಿ ಮೂರು ಹಾಯ್ಕು ಸಂಕಲನಗಳನ್ನು ತಂದಿದ್ದಾನೆ. ಈ ಮೂರು ಹಾಯ್ಕುಗಳನ್ನು 'ಮೂರು ಸಾಲು ಮರ' ದಿಂದ ಆಯ್ದುಕೊಂಡಿದ್ದೇನೆ. ಇನ್ನೆರಡು ಸಂಕಲನಗಳ ಹೆಸರು 'ಒಂದು ಹನಿ ಬೆಳಕು' ಮತ್ತು 'ಕೊಡೆಯಡಿ ಒಂದು ಚಿತ್ರ'.
*
ಚಿಮ್ಮಿದ ಖುಶಿಯಲ್ಲಿ
ಕಳೆದುಹೋಗಿದೆ
ಅನಾಥ ಬಿರಟೆ
*
ಹರಿದ ಶಾಂಪೇನ್
ಬರಿದಾದ ಬಾಟಲಿ
ಮೂಲೆ ಸೇರಿದ ಬಿರಟೆ
*
ಬಾಟಲಿಯ ಚೂರುಗಳು
ಶಾಂಪೇನಿನ ಮತ್ತಲ್ಲಿ
ಖುಶಿಯಾಗಿವೆ
No comments:
Post a Comment