1.
ಇಡೀ ರಾತ್ರಿ
ಆಕೆ
ರೇಷ್ಮೆ ಹುಳುವಿನಂತೆ
ಮಲಗಿದ್ದಳು.
-Shizunojo
2.
ಭಾರಿ ಹಿಮಪಾತ,
ಸತ್ತೇ ಹೋಗುತ್ತೇನೆ.
ಗಂಡನ ಕೈ ಬಿಟ್ಟರೆ
ಬೇರೆ ಕೈಗಳಿಲ್ಲ ನನಗೆ.
-Hashimoto
3.
ದುಂಬಿ ಸತ್ತ
ಬಿಸಿಲಲ್ಲೇ, ನನ್ನ
ಕೂದಲೊಣಗಿಸಿಕೊಂಡೆ.
ಬಿಸಿಲಲ್ಲೇ, ನನ್ನ
ಕೂದಲೊಣಗಿಸಿಕೊಂಡೆ.
-Hashimoto
4.
ಮಟ ಮಟ ಮಧ್ಯಾಹ್ನ
ದಣಿಯದೇ ನೋಡುತ್ತಿದ್ದಾಳೆ
ದೂರ ಉರಿಯುತ್ತಿರುವ ಬೆಂಕಿ.
ದಣಿಯದೇ ನೋಡುತ್ತಿದ್ದಾಳೆ
ದೂರ ಉರಿಯುತ್ತಿರುವ ಬೆಂಕಿ.
-Katsura
5.
ಶರತ್ಕಾಲ ಬರುತ್ತಿದ್ದಂತೆ
ಆತ್ಮ, ಮೊಲೆ ಎಲ್ಲವನ್ನೂ
ತೋಳುಗಳಿಂದ ಅವುಚಿಕೊಳ್ಳಬೇಕು
ಅನ್ನಿಸುತ್ತದೆ.
ಆತ್ಮ, ಮೊಲೆ ಎಲ್ಲವನ್ನೂ
ತೋಳುಗಳಿಂದ ಅವುಚಿಕೊಳ್ಳಬೇಕು
ಅನ್ನಿಸುತ್ತದೆ.
-Katsura
hAyaku sogasu, chitragalu innu sogasu
ReplyDeletehaaykugala chamak ninda nanna manassu koraiside.
ReplyDelete