Sunday, 15 September 2013


ಹಸಿವು

ಸು ರಂ ಎಕ್ಕುಂಡಿ 

  











ಸೂರ್ಯ ಹೇಗಿದ್ದಾನೆ ಗೊತ್ತೆ ನಿನಗೆ?
ಉರಿಯ ಬಿಳಿ ರೊಟ್ಟಿಯಂತಿರುವ ನಮಗೆ

ಚಂದ್ರ ಹೇಗಿದ್ದಾನೆ ಗೊತ್ತೆ ನಿನಗೆ?
ಹಾಲಿನ ರೊಟ್ಟಿಯಂತಿರುವ ನಮಗೆ

ಸೂರೆಗೊಂಡಿಹ ತಾರೆ ಗೊತ್ತೆ ನಿಮಗೆ?
ಕೊಳೆಗೇರಿಗಳ ಕಡಲೆಪುರಿಯು ನಮಗೆ

ಹೌದು ಮಗು ನೀನು ಹೇಳಿದ್ದು ನಿಜವು
ಮಕ್ಕಳಿಗೆ ಎಂದಿಗೂ ಅಷ್ಟು ಹಸಿವು


***

ಚುಕ್ಕಿ ಚಿತ್ರ: ಮೋಹನ ವೆರ್ಣೇಕರ್
ಕೃಪೆ:ಅವಧಿ









No comments:

Post a Comment