ಜ್ಞಾನೋದಯ
ಅವಧಿ
ಮುಗಿವವರೆಗೆ
ಇಡೀ ಹೊತ್ತು
ಧೇನಿಸಿ
ಯಾವ ಪುಸ್ತಕ
ಯಾವ ಪುಟದ ಚಡಿ
ಎಂದೆಲ್ಲ
ಕಂಪಿಸುತ್ತ
ಹುಡುಕಿ
ಹೋ! ಮರಿಹಾಕಿದೆ
ನೋಡು ಬಾ
ಎಂದು ಕರೆದೆ
ಎಲ್ಲಾ ಬಲ್ಲ
ವಿಶ್ವಾಸದ ನಡಿಗೆಯಲ್ಲಿ
ಬಂದವಳು
ಕಣ್ಣರಳಿಸಿ ನೋಡಿ
ಬುದ್ಧನ ನಗೆಯಲ್ಲಿ
ಅಂದಳು-
ನೀನಿಟ್ಟಿದ್ದೇ
ಎರಡು ಗರಿಯಲ್ಲವೇ?
ಜ್ಙಾನೋದಯವಾಯಿತು.
***
ಅವಧಿ
ಮುಗಿವವರೆಗೆ
ಇಡೀ ಹೊತ್ತು
ಧೇನಿಸಿ
ಯಾವ ಪುಸ್ತಕ
ಯಾವ ಪುಟದ ಚಡಿ
ಎಂದೆಲ್ಲ
ಕಂಪಿಸುತ್ತ
ಹುಡುಕಿ
ಹೋ! ಮರಿಹಾಕಿದೆ
ನೋಡು ಬಾ
ಎಂದು ಕರೆದೆ
ಎಲ್ಲಾ ಬಲ್ಲ
ವಿಶ್ವಾಸದ ನಡಿಗೆಯಲ್ಲಿ
ಬಂದವಳು
ಕಣ್ಣರಳಿಸಿ ನೋಡಿ
ಬುದ್ಧನ ನಗೆಯಲ್ಲಿ
ಅಂದಳು-
ನೀನಿಟ್ಟಿದ್ದೇ
ಎರಡು ಗರಿಯಲ್ಲವೇ?
ಜ್ಙಾನೋದಯವಾಯಿತು.
***
No comments:
Post a Comment