Friday, 20 September 2013

ಅರಬ್ ಜಗತ್ತಿನ' ಹೆಣ್ಣು ಮಕ್ಕಳ ಕವಿತೆಗಳ ಅನುವಾದ ಫ್ರಂಚ್ ಮತ್ತು ಇಂಗ್ಲಿಶ್ ಭಾಷೆಯಿಂದ

-ಎಂ.ಆರ್. ಕಮಲಾ

Metikurke Ramaswamy Kamala

ಡಿ ಎಚ್ ಮೆಲ್ಹೇಮ್ ಳ ಕವಿತೆ


 
ಫ್ರೆಂಚರು ಹೇಳುತ್ತಾರೆ:
ಲೆಬನೀಸ್ ಯಾರಿಗೆ ಗೊತ್ತು?
ಅಥವಾ ಸಿರಿಯನ್? (ಸರ್ಬಿಯನ್? ಸೈಬೀರಿಯನ್?)
ಸಾಮಂತನಿಗೆಂದು
ಸಾಮ್ರಾಜ್ಯಶಾಹಿ ಪ್ರಿಯ

ಇರಬಹುದು
ಫಿನಿಶಿಯನ್ನರಿಂದ ಬಂದ
ನಿನ್ನದೆ ಗುರು ಪರಂಪರೆ,
ಸಂಸ್ಕೃತಿ, ವೈದ್ಯರು ಇತ್ಯಾದಿ

ಆದರೆ,
ಇಮಿಗ್ರೇಶನ್ ಅಧಿಕಾರಿಗಳು
ನೆರೆ ಹೊರೆಯವರು
ಒಡೆಯರು
ಉನ್ಮತ್ತತೆಗೆ ಮನ ತೆತ್ತವರು
ಹೊರ ದೇಶದಿಂದ ಹೊತ್ತು ತಂದ
ವಿಚಿತ್ರ ಇಂಗ್ಲಿಷಿನ
ಬೆಡಗಿಗೆ ಬೆರಗಾಗಿ
ಒಪ್ಪಿಗೆಯ ಮುದ್ರೆ ಒತ್ತುತ್ತಾರೆ

ಇಮಿಗ್ರೇಶನ್ ಅಧಿಕಾರಿ
ನನ್ನ ಕೇಳಿದ,
ಸಿರಿಯನ್?
ಹಾಗೆಂದರೇನು?
(ಗೊಗ್ಗರು ಗಂಟಲಲ್ಲಿ
ಉಗುಳು ನುಂಗುತ್ತ)

ನಿನ್ನ ಶಿಕ್ಷಕಿ
ಮನೆಯಲ್ಲಿ ಅರೇಬಿಕ್ ಮಾತಾಡುವ
ಉಚ್ಚಾರವ ಹಂಗಿಸುತ್ತಾರೆ

ಅಪರಿಚಿತರ ಆತಂಕದ ನಡುವೆಯೂ
ವಿದೇಶಿ ಶಾಲೆಗೇ ಹೋಗಿ
ನನ್ನತನದ ಪರಿಶುಧ್ಧತೆಯ
ಪರಿಚಯಿಸಿದೆ

ತರಗತಿಗೂ ಮೊದಲು
ಆ ಶಿಕ್ಷಕಿ ತನಗಿಷ್ಟ ಬಂದವರ
ತಲೆಗೂದಲು ಮಾತ್ರ ಸವರಿ
ಮುದ್ದಿಸುವುದನ್ನು
ಕಂಡರಾಗದಿದ್ದ ನನ್ನ
ಕಂಡರಾಗದಂತೆ
ನಡೆದುಕೊಳ್ಳುತ್ತಿದ್ದಳು

ಜನರಿಗೆ ಸಣ್ಣತನದ
ಪ್ರದರ್ಶನವೇನು ಇಷ್ಟವಿಲ್ಲ
ಆದರೂ ನೀನು
ಫ್ರೆಂಚಿನಲ್ಲಿ ಮಾತಾಡುವುದು
ಒಳ್ಳೆಯದು!


***

No comments:

Post a Comment