Monday, 16 September 2013



ಸಾಲುಗಳು



ಬೇಲಿ ಹಾಸುಗಳ
ಹುಲ್ಲು ಹೂಗಳ
ಅಂದ
ಸೆರೆಹಿಡಿವಲ್ಲಿಗೆ
ಮುಗಿಯಿತು.
ಧ್ಯಾನ ಫಲಿಸಿತೊ
ಬಿಟ್ಟಿತೊ
ನೋಡುವ ಗೊಡವೆಗೆ
ಹೋಗಲಿಲ್ಲ.


***

ಬರುವುದು
ಶಿಶಿರ
ಎಂಬುದೆ
ಬೆಚ್ಚಗಾಗಿಸುತ್ತಿದೆ!



***

ರಕ್ಕಸ
ತಕ್ಕಡಿಯ ತಳಕ್ಕೆ
ಗುಲಗುಂಜಿ ಅಂಟಿಸಿ
ಕುಳಿತಿದ್ದಾನೆ
ತೂಕದಕಲ್ಲುಗಳೆಲ್ಲ
ಹೆಣಭಾರ
ಸಿಗುತ್ತಿಲ್ಲ ತೂಕ.


***


ಈಗಲೇ
ಸ್ವಲ್ಪ ಚಿಟ್ಟೆತನ
ಬಂದುಬಿಟ್ಟಿತೇ?


***
ಅದೇ ಜಾಗ, ನದಿ
ಮತ್ತು
ನನ್ನ
ಬೇಸರಕ್ಕೆ
ನೀರು
ನಕ್ಕಿತು.


***



ಭೂಗೋಲದ ಮೇಲೆ ಭಾರ
ಸುಡು
ಗುಲಗುಂಜಿಯ ಧ್ಯಾನ.



***



No comments:

Post a Comment