Tuesday 10 September 2013




ಸಾಲುಗಳು


1.


ಬೆನ್ನಿನಲೊಂದು ಕುರವೆದ್ದಂತೆ
ಚಡಪಡಿಸುತ್ತಿದ್ದೆ
ರಕ್ತ ಸಕ್ಕರೆಯಲ್ಲಿ
ಸೇರಿತೊ
ಎಂಬ ಆತಂಕ
ಹೀಗಾಗಿದೆಯಲ್ಲೆ
ಅಂದೆ
ನನ್ನವಳಲ್ಲಿ
ನಿನ್ನ ಬೆನ್ನಲ್ಲಿ
ನಾ
ನೋಡಿದಾಗಿಂದ
ಇತ್ತಿದು
ಹೊಸತಲ್ಲ
ಎಂದಾಗ
ಐವತ್ತರ
ಹೊಸ್ತಿಲಲ್ಲಿ
ನಿಟ್ಟುಸಿರಿಟ್ಟೆ
ನನ್ನ
ಬೆನ್ನ
ಬಲ್ಲವಳ
ನೆನಪ ನಂಬಿ.









2.

ಧುತ್ತೆಂದು
ಎದುರಾಗಿದ್ದು
ಎದೆಗಿಳಿಯಿತು
ಅಲ್ಲೇ
ಸಿಂಬಿಸುತ್ತಿ
ಮಲಗಿದ್ದಕ್ಕೆ
ಎಚ್ಚರವೇ ಇಲ್ಲ.




3.

ಒಳಹೊಕ್ಕು
ಕೂಗಿದೆ
ತೆರೆಯಿರಿ ಬಾಗಿಲು
ದನಿ ಕೇಳಿತು
ಪ್ರವೇಶ
ಅಸಾಧ್ಯ




4.

ವಿಷ, ಅಮೃತಗಳ
ಪಾತ್ರೆಯೊಳಗಿನ
ಪಾತ್ರೆ
ನನ್ನೊಡಲು
ಚೆಲ್ಲುತ್ತಲೇ
ಇರುವಾಗ
ದಕ್ಕಿದ್ದು
ಸೀರಿದ್ದು
ಅದದು
ಅಷ್ಟಷ್ಟು
.


5.

ಜೋಡು ಸಿಕ್ಕದಲ್ಲಿ ಜೋತಿರುವ
ವಿಷ, ಅಮೃತ-
ಕ್ಕೆ ಬಿದ್ದ
ಹೆಪ್ಪಿನ
ಹನಿ
ಯಾವುದನ್ನು
ಮೊದಲು
ಗಟ್ಟಿಯಾಗಿಸುವುದೊ,
ಕಾಯಬೇಕು.
6.

ಬಟ್ಟೆ ತೊಡುವಾಗ
ಕೇಳಿದೆ-
ಮನದ ಬೆತ್ತಲನ್ನೂ
ಮುಚ್ಚಿಬಿಡು.
ನಕ್ಕು ಹೇಳಿತು-
ಇದು 
ಮಾನವಂತರ ಮಾತಲ್ಲ.









***














No comments:

Post a Comment