ಸಾಲುಗಳು
ಮಳೆ ಹುಳಗಳೆದ್ದಿವೆ
ಗೊತ್ತಿದೆಯೋ ಇಲ್ಲವೊ
ರೆಕ್ಕೆಯ
ಆಯುಸ್ಸು
ಮೂಗರಳಿಸಿ
ಕುಳಿತಿರುವ
ಇರುವೆಗಳಿಗೆ
ಇದು
ಹೇಗೆ ತಿಳಿಯಿತು?
***
ಇಷ್ಟು ದಿನ
ನಡೆಸಿದಿ ಮಳೆಯೆ
ಕಾಳಿನೆದೆಯಲ್ಲಿ
ಹಾಲುತುಂಬುವ ಹೊತ್ತು
ಮರೆಯದಿರು
ಹಸಿದ ಗಂಗಾಳ
ಎರಡು ತುತ್ತು.
***
***
ಓದಿದಾಗ
ತಾನೇ ಬರೆಯಬಹುದಾಗಿದ್ದ ಸಾಲುಗಳು
ಅನಿಸಿದರೆ
ಕವಿತೆ ಒಳಗಿಳಿದಿಲ್ಲ!
ಪೂರ್ತಿ
ಕಳಚಿಕೊಂಡೆ-
ನೆಂಬುದು
ಭ್ರಮೆ
ಉಳಿದೇ ಉಳಿದಿದೆ
ಒಂದಿಷ್ಟು.
***
ವೈವಿಧ್ಯ ಅರಸಿ
ಬಿಡಿಸುತ್ತಾ ಹೋದಂತೆ
ಕೈ ಪಳಗಿತು
ಚಿತ್ರ
ಒಂದನೊಂದು
ಹೋಲತೊಡಗಿದವು.
ಹೋಲತೊಡಗಿದವು.
***
ನೀನು ಕೊಳಲು
ನಾನು ಉಸಿರು
ಎರಡೂ ಸೇರಿ
ಮಧುರ ಗಾನ...
ತಲೆತೂಗಿತು
ಎಲ್ಲ ಕೊಳಲ ಗಾನಕೆ
ಬಿದಿರ ಮೆಳೆ ಹೊಕ್ಕ ಬಿಸಿಯುಸಿರಿಗೆ
ಕವಿಸಮಯಕ್ಕೆ
ಇನ್ನೂ ಮುಗಿಯದ
ಕೀಚಕಾತ್ ಉಪಕೀಚಕಕ್ಕೆ
ಆದರೆಹಿಡಿ ಉಸಿರನ್ನೇ
ಕೊಳಲಿಗೆ ಕೊಟ್ಟು
ಗಾನ
ಹೊರಡುವಾಗ
ದೂರದಲ್ಲೆಲ್ಲೋ ಕೇಳಿದಂತಾಯ್ತೇ?
***
No comments:
Post a Comment