Tuesday, 24 September 2013



ನೆನಪು






ರಾತ್ರಿ ಇಡೀ

ಹಗಲು ನೆಲಕ್ಕಿಟ್ಟ

ಬಿತ್ತದ್ದೆ ಕನಸು

ಬೆಳಗಾಗಿದ್ದೆ

ಓಡಿ ಹೋಗಿ ನೋಡಿ

ನಿರಾಶೆ

ದಿನವೂ ಇದೇ ಕತೆ

ತಹತಹಿಕೆಗೆ

ಪಕ್ಕಾಗಿ ಬಿಟ್ಟಿತ್ತು

ಮನಸ್ಸು

ಗೊತ್ತಿರಲಿಲ್ಲವೆ

ಮೊಳೆಯಲು

ನಾಕೈದು ದಿನವಾದರೂ

ಬೇಕೆಂಬ

ನಿಜ?



ಅಂತೂ

ಆ ದಿನ ಬಂದೇ ಬಂತಲ್ಲ

ಬೇರನಿಳಿಸಿ

ಮತ್ತೆ ಬೀಜ ಆಕಾಶಕೆ ಜಿಗಿದ

ಕುಕ್ಕರಗಾಲಲ್ಲಿ ಕೂತು

ಮೈ ಮರೆತ ದಿನ

ಈಗೇಕಿಲ್ಲವೊ

ಎಂದು

ಗೊಣಗುತ್ತಿರುವಾಗ

ಭೂಮಿ ಸೇರದ

ಬೀಜ ನಕ್ಕಿತು.

***

No comments:

Post a Comment