Wednesday, 14 August 2013

ತಪ್ಪು ಲೆಕ್ಕ                            ಡಾ. ಜಿ. ಕೃಷ್ಣ


















ಮುಖಾಮುಖಿಯಲ್ಲಿ
ಥಟ್ಟನೆ ಹೊಳೆದಿದ್ದು
ಒಳಗೆಲ್ಲ ತುಂಬಿಕೊಂಡಿದ್ದು
ಅವನೊಳಗೆ ಹರಿಯಬೇಕೆನಿಸಿದ್ದು
ಖರೆ
ಒಡ್ಡಿದ ಕೈಯ ಬಿಸುಪಿನೊಳಗೆ
ಉದ್ದನೆಯ ಉಗುರು
ಚಡಿಯಲ್ಲಿ ಕೊಳೆ
ಒಮ್ಮೆ ಹಿಂಜರಿಯುವಂತೆ ಮಾಡಿದ್ದೂ
ಖರೆ
ತಲೆನೋವಿಗೆ ಶಿರಚ್ಛೇದನವೆ?
ಎಲ್ಲಾ ತೆಗೆದು
ಕೈ ತೊಳೆಸಿ
ಕಲಿಸಿದೆನೆಂಬ ಉಮೇದಿಯ
ಮರೆವಿನಲ್ಲಿ
ಮತ್ತೆ ಬೆಳೆದ ಉಗುರು
ಸಂದಿಯಲ್ಲಿ
ಸೇರಿಕೊಂಡ
ಅವಳದೇ ರಕ್ತ, ಮಾಂಸ
ಮೆಲ್ಲನೆ
ನಾಭಿಯಿಂದ ಎದ್ದುಬಂದ
ವಾಕರಿಕೆ
ಕಣ್ಣೊಳಗೆ ತುಂಬಿಕೊಂಡ
ಅವನ
ಪೆದ್ದು ನೋಟ.

ಲೆಕ್ಕ ತಪ್ಪಿದ
ಭಾವ.

***

No comments:

Post a Comment