Monday 12 August 2013

ಫೇಸ್ಬುಕ್ ಕತೆ                       ಸೃಜನ್ ಕಾರ್ಟೂನಿಷ್ಟ್
ಕೃಪೆ: ಅವಧಿ


ಆತ ಹೊಸದಾಗಿ ಫೇಸ್ ಬುಕ್ ಗೆ ಅಡಿಕ್ಟ್ ಆಗಿದ್ದ . ಹೆಂಡತಿಗೆ ಕೊಡಿಸಿದ ಹೊಸ ಚಿನ್ನದ ಸರ ಹುಟ್ಟುಹಬ್ಬಕ್ಕೆ ಕೊಟ್ಟ ಆಕರ್ಷಕ ವಿನ್ಯಾಸದ ಚೆಮ್ಮನುರ್ ನಲ್ಲಿ ಕೊಂಡ ಭಾರಿ ಬೆಲೆಬಾಳುವ ಉಂಗುರ, ಹೊಸದಾಗಿ ಕೊಂಡ ಪಲ್ಸರ್ ಬೈಕ್ , ಸಪ್ನದಿಂದ ತಂದ ಹೊಸ ಪುಸ್ತಕಗಳು , ಪ್ರಜ್ಞೆನ್ಸಿ ಕನ್ ಫಾರ್ಮ್ ಆಗುತ್ತಿದ್ದಂತೆ ಆ ವಿವರಗಳನ್ನು ಪ್ರತಿಯೊಂದನ್ನು ಫೋಟೋಗಳ ಸಮೇತ ಅಪ್ಡೇಟ್ ಮಾಡುತ್ತಿದ್ದ. ನಿಜ ಹೇಳಬೇಕೆಂದರೆ ಆತನ ಮನೆ ಮತ್ತು ಮನೆಯೊಳಗಿನ ಸದಸ್ಯರು .. ಸಾಮಾನುಗಳು ಆತನ ಬ್ಯಾಂಕ್ ಬ್ಯಾಲೆನ್ಸ್ .. ಎಲ್ಲವೂ ಅವನಿಗಿಂತ ಅವನ ಹೆಂಡತಿಗಿಂತ ಫೇಸ್ ಬುಕ್ ಗೆಳೆಯರಿಗೆ ಜಾಸ್ತಿ ಗೊತ್ತಿದ್ದವು.
ಬೆಳಿಗ್ಗೆ ೪. ೩೦. ಕ್ಕೆ ಫೇಸ್ ಬುಕ್ ಓಪನ್ ಮಾಡಿದನೆಂದರೆ ಮುಚ್ಚುತ್ತಿದ್ದುದ್ದು ಯಾವ ಮಧ್ಯರಾತ್ರಿಯಲ್ಲೋ. ಒಂದು ದಿನ ಅವನನ್ನು ಬಾಸ್ ಕ್ಯಾಬಿನ್ ಗೆ ಕರೆದು ಆಂಧ್ರದ ದೂರದ ಕುಗ್ರಾಮದಲ್ಲಿಯ ಆಸ್ತಿ ಸಂಬಂದಿತ ಕಾಗದ ಪತ್ರಗಳನ್ನು ನೀನೆ ತರಬೇಕೆಂದು ಎರಡು ಮೂರುದಿನ ತಡವಾದರೂ ಅಲ್ಲಿ ಉಳಿದುಕೊಂಡಾದರು ತೆಗೆಡುಕೊಂಡು ಬರಲು ಹೇಳಿದರು. ಮಾರ್ಚ್ ಎಪ್ರಿಲ್ ಸಮಯ ಬೇರೆ. ಬಾಸ್ ಹೇಳಿದ್ದನ್ನು ಮಾಡಲೇ ಬೇಕಿತ್ತು . ಹೆಂಡತಿ ಹೆರಿಗೆಗೆಂದು ತವರಿಗೆ ಹೋಗಿದ್ದಳು . ಡಾಕ್ಟರ್ ಕೊಟ್ಟ ದಿನಾಂಕ ಕ್ಕೆ ಇನ್ನೂ ಸಮಯವಿತ್ತು.
ಒಲ್ಲದ ಮನಸ್ಸಿನಿಂದ ಎಲ್ಲವನ್ನು ಫೆಸ್ ಬುಕ್ ನಲ್ಲಿ ಬರೆದುಕೊಂಡ .
ಬಿಟ್ಟು ಹೋಗುತ್ತಿರುವಾಗ ಬೈಕ್ ಹತ್ತಿರ ನಿಂತು ಫೋಟೋ ತೆಗೆಸಿಕೊಂಡ , ಮನೆಯ ಪ್ರತಿ ಕೋಣೆ ಯಲ್ಲೂ ನಿಂತು ಫೋಟೋ ತೆಗೆಸಿಕೊಂಡ . ಲಾಂಗ್ ಶಾಟ್ ನಲ್ಲಿ ಮನೆಯ ಫೋಟೋ,ತಿರುವಿನಲ್ಲಿ ಒಂದು ಫೋಟೋ .ಹೀಗೆ ಸುಮಾರು ಫೋಟೋಗಳನ್ನು ತೆಗೆಸಿಕೊಂಡು ಫೆಸ್ ಬುಕ್ ನಲ್ಲಿ ಅಪ್ಡೇಟ್ ಮಾಡಿದ .
ಕೊನೆಗೂ ಬಾಸ್ ಹೇಳಿದ್ದ ಕೆಲಸವನ್ನು ಮುಗಿಸಿಕೊಂಡು ಒಂದು ವಾರದ ನಂತರ ಬೆಳಿಗ್ಗೆ ೬ಗಂಟೆ ಗೆ ಮೆಜೆಸ್ಟಿಕ್ ನಿಂದ ಆಟೋನಲ್ಲಿ ಒಂದೂವರೆ ಪಟ್ಟು ಹಣ ಕೊಟ್ಟು ಮನೆಗೆ ಬಂದ . ಬಾಗಿಲು ತೆರೆದಿತ್ತು . ಮನೆ ಖಾಲಿ ಹೊಡೆಯುತ್ತಿತ್ತು . ಮನೆ ದರೋಡೆಯಾಗಿತ್ತು .
ಕೊನೆ ಕಿಕ್ : ಆ ಇಬ್ಬರು ನೆಲಮಂಗಲ ಧಾಬ ದಲ್ಲಿ ಹೊಟ್ಟೆ ತುಂಬಾ ಊಟ ಮಾಡಿ ಬೈಕ್ ಸ್ಟಾರ್ಟ್ ಮಾಡುವಾಗ ಜೋತೆಗಿರುವವನೊಬ್ಬ ಅಂದ ” ಅಣ್ಣ ಫೇಸ್ ಬುಕ್ ನಿಂದ ಹಿಂಗೂ ಅಡ್ವಾನ್ಟೆಜ್ ಇದೆ ನೋಡಣ್ಣ ”

***

No comments:

Post a Comment