Thursday, 22 August 2013

Sandhya Raniಎಲ್ಲಿ ಕಳೆದು ಹೋದವು...?

ಸಂಧ್ಯಾ ರಾಣಿ





ನಿನ್ನ ಹೆಸರಿನ ಒಂದೊಂದು
ಅಕ್ಷರಗಳನ್ನೆಣಿಸಿ, ಎಣಿಸಿ
ಹಾರುತ್ತ ಮೆಟ್ಟಿಲಿಳಿವಾಗ
ಕಾಲ್ಗೆಜ್ಜೆ ದನಿಯಲ್ಲಿ
ಹಾಡಾದ ಕನಸುಗಳು.
ಮುದ್ದೆ ಕಟ್ಟುವಾಗ,
ರೊಟ್ಟಿ ತಟ್ಟುವಾಗ
ಅನ್ನ ಬಸಿಯುವಾಗ
ಬೆರಳ ನಡುವೆ
ಜಿನುಗುತ್ತಿದ್ದ ಭಾವಗಳು.
ಬೆರಳುಗಳು ನರ್ತಿಸಿ
ನಿರಿಗೆ ಹಿಡಿಯುವಾಗ
ತೀಡಿ, ಸೆರಗ ಬೀಸುವಾಗ
ಸ ರಿ ಗ ಮ ಎಂದು
ಒಪ್ಪ ಕೂರುತ್ತಿದ್ದ ಸ್ವರಗಳು.

ಎಲ್ಲೆಂದರಲ್ಲಿ ಕಾಲಿಗೆ ತೊಡರುತ್ತಿದ್ದ ರಾಗಗಳು
ಸ್ಪರ್ಶಕ್ಕೆ ಕರಗಿ,
ಕಾಣದಾಗಿ,
ಖಾಲಿಯಾಗಿ ಕುಳಿತು,
ಖಾಲಿ ಕೈ ನೋಡುವಾಗ
ಮಂಡಿಯೂರಿ ಕನವರಿಸುತ್ತೇನೆ
’ಕಂಡೀರೇನವ್ವ, ನೀವು
ಕಂಡೀರೇನವ್ವ’


***

No comments:

Post a Comment