Friday, 23 August 2013

ಬರದ ಕನಸಿನ ಬೀಜ

ಡಾ.ಎಚ್.ಎಸ್ ಅನುಪಮಾ


ದಿನದಿನಾ ಖರ್ಜೂರ ತಿಂದು
ಅದೆಷ್ಟೋ ಬೀಜ ಹೊರಗೆಸೆದೆ
ಒಂದು
ಕೊನೇ ಪಕ್ಷ ಒಂದು ಬೀಜವೂ 
ತೇವಗೊಂಡು ಹಸಿರು ಮುಕ್ಕಳಿಸುವ
ನಮ್ಮ ತೋಟದಲ್ಲಿ ಮೊಳೆಯಲಿಲ್ಲ
ಬರದ ಮರುಭೂಮಿಯನ್ನೇ ಅವು
ಕನಸುತ್ತಿವೆಯೆಂದು ತಿಳಿದು 
ನೆಲ ತನ್ನ ಫಲವತ್ತತೆಯ ಕುರಿತೇ
ಅನುಮಾನ ತಳೆಯಿತು

***

No comments:

Post a Comment