ನಾಲ್ಕು ಬಸೂ ಸಾಲೆರಡುಗಳು
1.
ಇರುವುದನೆಲ್ಲ ಕೊಡುವಾಕೆ ಎದುರು ಬೇಕಿರುವುದಕಿಂತ ಕಡಿಮೆ ಪಡೆದೆ
ಈ ಪಾಠವಷ್ಟೇ ಪ್ರೀತಿ ಬದುಕಿಡೀ ಜೊತೆಯಲಿ ಉಳಿಯಲು ಸಾಕಾಯಿತು
.
2.
ನಾವು ಎರಡು ದಡಗಳೆಂಬ ಅರಿವು ನಮ್ಮಲಿತ್ತು
ಈ ವಾಸ್ತವವೇ ದಡಗಳ ನಡುವೆ ಪ್ರೀತಿನದಿ ಹರಿಸಿತು
3.
ನಿನೊಡನಿರುವ ಗಳಿಗೆ
ರಾತ್ರಿಯ ಕಲ್ಪನೆಯೇ ಬದಲಾಗಿಹೋಯಿತು
4.
ನನ್ನ ಬಳಿಗೆ ಕೀರ್ತಿಯ ಬೆಳಕಿನೊಡನೆಯೇ ಬಂದೆ
ಗುಲಾಮಗಿರಿಯ ನೆರಳಡಗಿಸಿಡಲು ನಿನಗೆ ಸಾಧ್ಯವಾಗಲೆ ಇಲ್ಲ
***
No comments:
Post a Comment