Thursday 11 July 2013

ಹಣತೆ ನಕ್ಕಿತು





                                                                         ನಾಗರಾಜ ಹರಪನಹಳ್ಳಿ
ಶತಮಾನಗಳು ಉರುಳಿದರೂ                                                                     
ತೀರದ ಚಿರಂತನ ಹಸಿವು

ಸೂರ್ಯ ಸೂತಕವಿಲ್ಲದ ಮನೆಯ
ದಿನವೂ ಹಾದುಹೋಗುತ್ತಾನೆ

ಚಂದ್ರ ತಾರೆಯರು
ಆಕಾಶದ ಕ್ಷುದ್ರರಿಗೆ ಸಾಂತ್ವನ ಹೇಳುತ್ತಾರೆ

ಪ್ರೀತಿ ಸಾರಲು ನದಿ
ದಣಿವಿಲ್ಲದೆ ಹರಿದಿದೆ

ಮನುಷ್ಯ ಮಾತ್ರ ಸೂತಕದಲ್ಲಿ
ತೂಕಡಿಸುತ್ತಿದ್ದಾನೆ
ದಕ್ಕದ ಪ್ರೀತಿಗೆ ಸೋತು
ನಿಲ್ಲದ ಮುಪ್ಪ ಅಣೆಕಟ್ಟಿನಲ್ಲಿ ಬಂಧಿಸಹೊರಟಿದ್ದಾನೆ

ಅರಮನೆ ಮುಂದೆ
ಬದುಕಿನ ಕಿರುಹಣತೆ ನಕ್ಕಿತು.

***

No comments:

Post a Comment