ಅಂದಿನಿಂದ ಇಂದಿನವರೆಗೆ...
Wednesday, 17 July 2013
ನಡಿಗೆ
ಡಾ.ಜಿ ಕೃಷ್ಣ
ನಿನ್ನೆ
ಬೆಳಗಿನ ನಡಿಗೆಯ ನಡುವೆ
ನೋಡಿದೆ,
ಬಸವನಹುಳು
ರಸ್ತೆಯಲ್ಲಿ
ಆ ಬದಿಯಿಂದ
ಈ ಬದಿಗೆ
ತೆವಳುತ್ತಿತ್ತು.
ಅತಂಕದ ನಡುವೆ
ದಾಟಿಬಿಟ್ಟಿತು.
ಇಂದು
ಅದರದೇ ಗುಂಗು,
ನಾಯಿಗಳಿಗೆ
ಹೆದರಿ
ಒಯ್ಯುತ್ತಿದ್ದ ಬೆತ್ತ
ನನ್ನ ಹಿಡಿತದಲ್ಲಿ
ಕರುಣೆಯ ನಗು
ನಕ್ಕಿತು.
ನಾನೂ ನಕ್ಕೆ.
***
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment