Tuesday 30 July 2013

ಹಸಿವು ಒಂದೇ ಅಲ್ಲವ?                 ಎಮ್.ಎಸ್ ಕೃಷ್ಣಮೂರ್ತಿ ಗೀತಾ 


 M.s. Krishna Murthy Geetha      


ಅಮ್ಮ ಮಕ್ಕಳಿಗೆ ಗಂಜಿ ಊಟ ಕೊಡುವಾಗ
ಬೇಸರದಿಂದಿದ್ದಳು. ಮುಖ ಬಾಡಿತ್ತು, ಕಣ್ಣಲ್ಲಿ ನೀರಿದ್ದ ಹಾಗಿತ್ತು.
ಮಕ್ಕಳು ಉಣ್ಣದೆ ಕೇಳಿದರು, ಯಾಕಮ್ಮ ಏನಾಯಿತು?
ಅಮ್ಮನ ಕಣ್ಣೀರು ಉಕ್ಕಿತು.
ಮಕ್ಕಳೇ, ಯಜಮಾನ್ತಿ ಮಗುವಿಗೆ
ಅದೇನೋ ತೊಂದರೆಯಂತೆ, ಅದರಮ್ಮನ ಎದೆ ಹಾಲು ಕುಡಿಯಬಾರದಂತೆ,
ಬೇರೆ ಏನೋ ಹಾಲು ಕುಡಿಸಲು ಹೇಳಿದ್ದಾರೆ ಡಾಕ್ಟ್ರು
ಮಗು ಬಾಟಲ್ ಹಾಲು ಕುಡಿಯುತ್ತಿಲ್ಲ ಇಡೀ ದಿನ ಹಸಿವಿನಿಂದ ಅಳುತ್ತಿತ್ತು.
ನೆನಸಿಕೊಂಡು ಸಂಕಟವಾಗಿ ಅಳು ಬಂತು ಮಕ್ಕಳೇ.

'ನಾವೂ ಬಹಳ ದಿನ ಹಸಿವಿನಲ್ಲೇ ಇರ್ತೀವಲ್ಲಮ್ಮ'


ಇರಬಹುದು ಮಕ್ಕಳೇ,
ಹಸಿವು
ಇದ್ದವರಿಗೂ
ಇಲ್ಲದವರಿಗೂ ಒಂದೇ ಅಲ್ಲವ?


ಅಲ್ಲ ಎನ್ನಲು ಅವರಿಗೆ ತಿಳಿಯಲಿಲ್ಲ.

ಹಸಿವಿದ್ದರೂ ಗಂಜಿ ಉಣಲಿಲ್ಲ ಅವತ್ತು ಅವರು.... !!





***

2 comments:

  1. ಹೌದು, ಹಸಿವು ಉಳ್ಳವರಿಗೂ ಇಲ್ಲದವರಿಗೂ ಒ೦ದೆ. ಮಾರ್ಮಿಕ ಸಾಲುಗಳಿ೦ದ ಕವನ ಮನ ಮುತ್ತುವ೦ತಿದೆ. ಹ್ಯಾಟ್ಸ್ ಆಫ್ ಕೃಶ್ಣ ಮೂರ್ತಿ.

    ReplyDelete
  2. Drawing by Krishna Giliar is equally good!

    ReplyDelete