Tuesday, 9 July 2013




Photo: ಶರಾವತಿ ಕೊಳ್ಳದ ವಿಹಂಗಮ ನೋಟ...



ಸುಲಭವಲ್ಲ


ಸುಲಭವೇ ನದಿ ನೀರು ಹಂಚಿಕೊಳ್ಳುವುದು?
ಸುಲಭವಲ್ಲ, ಸಿದ್ಧಾರ್ಥ ಬುದ್ಧನಾದ ತಲ್ಲಣವದು

ಯಾವ ಋತುವಿನಲಿ ಉಕ್ಕೇರುವುದೋ
ಯಾವ ವರುಷದಲಿ ಪಾತ್ರ ಬರಿದಾಗುವುದೋ
ಜೀವಸೆಲೆಗೆ ಎಂದು ಯಾವ ಕುತ್ತೋ?
ಗೊತ್ತಿಲ್ಲ ನದಿಗೂ ಇದು

ಸುಲಭವೇ ನದಿ ನೀರು ಹಂಚಿಕೊಳ್ಳುವುದು?
ಸುಲಭವಲ್ಲ ಹುಟ್ಟಲಿರುವ ಕೂಸಿನ ನಗು ಹಂಚಿಕೊಳ್ಳುವುದು.

ಗಡಿಗೆರೆಗಳಿರದ ನೀರಿನ ಹರಿವು 
ತೀರ ಒಡೆಯಬಹುದು ಆಳ ಸುಳಿಸೆಳವು
ತಗ್ಗನರಸಿ ಹರಿವ ನೀರ ಮೇಲೆ
ಹಕ್ಕು ಅಧಿಕಾರದ ಮೋಹ ದಿಬ್ಬದ ಮೇಲಿರುವವರಿಗೆ 

ಸುಲಭವೇ ಹರಿವ ನೀರ ಹಂಚಿಕೊಳ್ಳುವುದು?
ಸುಲಭವಲ್ಲ ನೆಗೆವ ಪಾದದ ಜಿಗಿತ ಹಂಚಿಕೊಳ್ಳುವುದು..

ಸಿಕ್ಕಾಗ ಸಿಕ್ಕಿರುವಷ್ಟು ಕುಡಿದರೂ 
ದಾಹದ ನೆನಪಿಗೇ ತುಟಿ ಒಣಗಿ ಬಿರಿಯುವುದು 
ಬಾಯಾರಿದವನ ಒಡಲ ಬೇಗೆ
ದಕ್ಕೀತೆ ಕೋರ್ಟು ಕಾನೂನಿಗೆ

ಸುಲಭವೇ ಸಿಕ್ಕಷ್ಟು ನೀರು ಹಂಚಿಕೊಳ್ಳುವುದು?
ಸುಲಭವಲ್ಲ ಜೀವ ಜಲ ಪ್ರೇಮ ಹಂಚಿಕೊಳ್ಳುವುದು..


-ಡಾ. ಎಚ್.ಎಸ್ ಅನುಪಮಾ

2 comments:

  1. ಸುಲಭವಲ್ಲ ಜೀವ ಜಲ ಪ್ರೇಮ ಹಂಚಿಕೊಳ್ಳುವುದು..
    ನಿಜ...ಬುದ್ದನಂತವರಿಗೆ ಮಾತ್ರ ಅದು ಸಾಧ್ಯ .

    ReplyDelete
  2. ಖಂಡಿತಾ ಸುಲಭವಲ್ಲ. ಆದರೆ ನಾವು ಬೆಳೆಯಲು ಹವಣಿಸುತ್ತಾ ಸಾಗಿದಂತೆಲ್ಲಾ ನಮ್ಮನ್ನ ಕಾಯುವ ಜಗನ್ನಿಯಾಮಕಶಕ್ತಿ ನಮ್ಮಿಂದ ಸುಲಭವಲ್ಲದ್ದನ್ನೇ ನಿರೀಕ್ಷಿಸುತ್ತಾ ಸಾಗುತ್ತದಲ್ಲಾ, ಆ ಸಾಧನೆಯನ್ನೇ ಪರೀಕ್ಷೆಯಾಗಿ ಒಡ್ಡುತ್ತದಲ್ಲಾ,...ತುಂಬಾ ಸ್ಪಷ್ಟವಾದ ವಸ್ತುಸ್ಥಿತಿಯ ಅನಾವರಣ.

    ReplyDelete