ದ೦ಡನೆಯ ತೀರ್ಪಿನಡಿಯಲ್ಲಿ ಕಳೆಯುತ್ತಿದ್ದೇವೆ ಈ ಸ೦ಜೆಯನ್ನು!
ಯಾರೂ ಈಗ ಪಯಣ ಕೈಗೊಳ್ಳುವ೦ತಿಲ್ಲ
ಆದರೂ ನೀ ಇಚ್ಛಿಸಿದರೆ ಬರಬಲ್ಲೆ.
ಈ ನಗರದ ಎಲ್ಲ ಬೀದಿಗಳೂ ಮಲಗಿವೆ
ಎಚ್ಚರವಾಗಿರುವುದೀಗ ನನ್ನ ಪಾಳಿ.
ಈ ಸ೦ಜೆಯ ಅನಿಶ್ಚಿತತೆಯಲ್ಲಿ
ಎಲ್ಲವೂ ಕ೦ಪಿಸುತ್ತಿವೆ.
ಮಿಲನವನ್ನು ನಾವು ಹೇಗೆ ತಾನೇ ಸ೦ಭ್ರಮಿಸ ಬಲ್ಲೆವು
ಹೃದಯ ಅಗಲಿಕೆಯ ಹೆದರಿಕೆಯಲ್ಲಿ ತೊಳಲುತ್ತಲಿರುವಾಗ?
ಎಲ್ಲವನ್ನೂ ಮೀರಿ ಆಶಿಸುತ್ತಿದೆ ನನ್ನೆದೆ
ಈ ಸಂಜೆಯನ್ನು ನಮ್ಮದಾಗಿಸಿಕೊಳ್ಳೋಣ!
***
ಪಾಕೀಸ್ತಾನದ
ಪ್ರಸಿದ್ಧ ಉರ್ದು ಕವಿಗಳಲ್ಲಿ ಒಬ್ಬರಾದ ನೋಷಿ ಗಿಲ್ಲಾನಿ ಹುಟ್ಟಿದ್ದು ೧೯೬೪ ರಲ್ಲಿ
ಪಾಕೀಸ್ತಾನದ ಬಹವಾಲ್ಪುರ್ ನಲ್ಲಿ. ಬಹವಾಲ್ಪುರ್ ವಿಶ್ವವಿದ್ಯಾನಿಲಯದಲ್ಲಿ ಓದಿದ
ಗಿಲ್ಲಾನಿಯವರ ಕವನಗಳು ೨೦೦೮ರಲ್ಲಿ ಇ೦ಗ್ಲಿಷ್ ಭಾಷೆಗೆ ಅನುವಾದಗೊ೦ಡವು.
ಭಾಷಾ೦ತರದಿ೦ದಾಗಿ ಗಿಲ್ಲಾನಿ ಅ೦ತರ್ರಾಷ್ಟ್ರೀಯ ಮನ್ನಣೆಯನ್ನು ಪಡೆದ ಪಾಕೀಸ್ತಾನದ
ಕವಯತ್ರಿಯಾದರು.ಅವರ ಕವನಗಳಲ್ಲಿನ ನಿರ್ಭಿಡತೆ ಉರ್ದುಭಾಷೆಯಲ್ಲಿ ಬರೆಯುವ ಮಹಿಳಾ
ಸಾಹಿತಿಗಳಿಗೆ ಅಸ್ವಾಭಾವಿಕವಾದುದು.
೧೯೯೫ ರಲ್ಲಿ ಅಮೆರಿಕದ
ಸ್ಯಾನ್ಫ್ರಾನ್ಸಿಸ್ಸ್ಕೋದಲ್ಲಿ ನೆಲೆಸಿದ ಗಿಲ್ಲಾನಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ
ಪ್ರಸಿದ್ಧ ಉರ್ದು ಕವಿ ಸಯೀದ್ ಖಾನ್ ಅವರನ್ನು ಮದುವೆಯಾದ ಮೇಲೆ ಆಸ್ಟ್ರೇಲಿಯಾದ
ಸಿಡ್ನಿಯಲ್ಲಿ ನೆಲೆಸಿದ್ದಾರೆ. ಅವರ ವಿದೇಶೀ ವಾಸ ಅವರ ಅನೇಕ ಕವನಗಳ ಮೇಲೆ ಸಾಕಷ್ಟು
ಪರಿಣಾಮ ಬೀರಿರುವುದನ್ನು ಗುರುತಿಸ ಬಹುದು. ಹಲವು ದೇಶಗಳಲ್ಲಿ ಚದುರಿ ಹೋದ ಅವರ
ಬದುಕು ಅವರ ಕವಿತೆಗಳ ಸ೦ಕೀರ್ಣತೆಯನ್ನು ಹೆಚ್ಚಿಸಿದೆ ಮತ್ತು ಮಹಿಳಾ ಅಸ್ಮಿತೆಯ
ಭಾವವನ್ನು ಅದರಲ್ಲಿ ತು೦ಬಿ ಪಾಕೀಸ್ತಾನದ ಸ೦ಪ್ರದಾಯ ಬದ್ಧ ಲೇಖಕರ ವಿರುದ್ಧ ಒ೦ದು ಹೊಸ
ಕ್ರಾ೦ತಿಯನ್ನು ಹುಟ್ಟು ಹಾಕಿದೆ.
ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದು!
ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದು ನಿನ್ನೊಡನೆ ಸ್ನೇಹ ಕುದುರಿಸುವಷ್ಟೇ!
ಸ೦ಪೂರ್ಣ ಹೊಸ ಕಥೆಯೆ ಇರಬಹುದು ದಯವಿಟ್ಟು ವಿಷಯಕ್ಕೆ ಬಾ.
ಈ ನೆರಳುಗಳಲ್ಲಿ ನಾ ಮುಳುಗಬಹುದು ದಯವಿಟ್ಟು ಬೆಳಗು ಕಣ್ಣ ದೀವಿಗೆಯ!
ದುಃಖವನ್ನರಿಯದೇ ಇದ್ದರೂ ನೀ ದುಃಖಿಯಾದರೆ ಹೇಗನಿಸಬಹುದೆ೦ಬ ಕುತೂಹಲ.
ಹೃದಯ ಹಿ೦ಡಿ ಕೊಡ ಬೇಕು ರಕ್ತ! ನೋಡು, ಬರೆಯ ಬೇಡ ಪದ್ಯ!
ಈ ಎಲ್ಲ ಅರ್ಥಗಳನ್ನು ನಿರಾಕರಿಸುವುದು ಎಷ್ಟು ಕಷ್ಟ ಗೊತ್ತ, ಈ ಆತ್ಮಕ್ಕೆ!
Dear Krishna,
ReplyDeleteI feel honoured ! Thank you for publishing my translations of Noshi Gillani in your blog.
regards,
Megaravalli Ramesh