Tuesday, 9 July 2013

ಅರಿವಿನ ಮಾರಿತಂದೆ ವಚನ

 



ಗಂಧವನೊಳಗೊಂಡ ಕುಸುಮವ ಕೊಯ್ಯಬಹುದಲ್ಲದೆ
ಗಂಧವನೊಳಗೊಂಡ ವಾಯುವ ಕೊಯ್ಯಬಹುದೆ
ಘಟವನೊಳಗೊಂಡಿದ್ದಾತ್ಮನನರಿಯಬಹುದೆ
ಆತ್ಮನೊಳಗೊಂಡಿದ್ದ ಘಟವನರಿಯಬಹುದಲ್ಲದೆ
ವಸ್ತು ಅಂಗವಾದಲ್ಲಿ ಅರಿಯಬಹುದಲ್ಲದೆ
ಅಂಗ ವಸ್ತುವಾದಲ್ಲಿ ಹಿಂಗಿ ಅರಿವ ಠಾವಿನ್ನಾವುದುಕುಸುಮಕ್ಕೆ ಕಡೆ ನಡು ಮೊದಲಲ್ಲದೆ
ಗಂಧಕ್ಕೆ ಕಡೆ ನಡು ಮೊದಲುಂಟೆ
ಅರಿವುದಕ್ಕೆ ಅರುಹಿಸಿಕೊಂಬುದಕ್ಕೆ ಕುರುಹನರಿತಲ್ಲಿಯೆ
ಸದಾಶಿವಮೂರ್ತಿಲಿಂಗವೆಂಬ ರೂಪು ನಿಂದಿತ್ತು

2 comments:

  1. ನಮ್ಮ ಹನಿಗಳಿಗು ಚಿತ್ರ ಬಿಡಿಸಿ ಸರ್....ವಚನದ ಆಯ್ಕೆ ನಿಮ್ಮ ಮನಸ್ಸಿನ ಪ್ರತಿಬಿಂಬ ...ಚಿತ್ರ ಸೊಗಸು .

    ReplyDelete
    Replies
    1. ಧನ್ಯವಾದಗಳು ನಾಗರಾಜ್.

      Delete