Saturday, 13 July 2013


ಪುಷ್ಪವತಿ-ಫಲವತಿ 
                                        ಡಾ.ಜಿ.ಕೃಷ್ಣ       
ಮಂದಮಾರುತದ
ಬೆನ್ನೇರಿಬಂದ
ದುಂಬಿಯ
ಹಸಿವು ಹಿಂಗಿ
ಪರಾಗಸ್ಪರ್ಶದ ಔದಾರ್ಯ
ಪುಷ್ಪವತಿ ಫಲವತಿ
ಮಿಡಿಕಾಯಿ ದೋರೆ
ಹಣ್ಣಾಗಿ
ತೊಟ್ಟುಕಳಚುವ ಹೊತ್ತು
ಮತ್ತೆ
ಮೈದುಂಬಿದ ಮೊಗ್ಗು
ಝೇಂಕಾರ ಹೊತ್ತು
ಸುಳಿದಾಡುವ
ಲಂಪಟ ಗಾಳಿ
ಮಗೂ,
ಮೆಲ್ಲ ಪಾದಗಳೂರು
ನನ್ನ
ಸಕಲೆಂಟುಗಳೂ
ನಿನ್ನಲ್ಲಿ ಅವಿತು ಕಾದಿವೆ
ಸಮಯವಿಲ್ಲ
ಮತ್ತೆ ಅಣಿಯಾಗಿ
ನೊಗಕ್ಕೆ
ಹೆಗಲೊಡ್ಡಬೇಕಿದೆ
*** 

No comments:

Post a Comment