ಶಂಕರನ ಭಾವ ನದಿ
ನಾನು
ಪಾತ್ರದೊಳಗೇ ಹರಿವ
ನೀರು
ಹೊಸತೇನೂ ಎದುರಾಗುತ್ತಿಲ್ಲ
ಅದೇ ಅಡ್ಡ, ಅದೇ ಉದ್ದ
ದಡಗಳಿಗೆ ಹೆದರಿ
ಹರಿದು ಹೋದವರ ಹಾದಿ
ಒಮ್ಮೆ
ಹರಿಯಬೇಕಿದೆ
ದಿಕ್ಕೆಟ್ಟು
ಹೊಸನೆಲವ ಅಪ್ಪುತ್ತ
ದಂಡೆಗಳ ಮೀರುತ್ತ
ಬಂಡೆಗಳ ಸರಿಸುತ್ತ
ಸಮುದ್ರ ಸೇರುವುದೇ ಗುರಿ ಎಂಬುದ
ಮರೆಯಬೇಕು
ಮೀರಿ ಹರಿದಲ್ಲಿ
ಇಂಗಿಹೋದರೂ ಸರಿ
ಸಿಕ್ಕಿ ಒದ್ದಾಡಿದರೂ ಸರಿ
ಒಡಲೊಳಗಿನ ಮೆಕ್ಕಲು ಮಣ್ಣ ಹರಡಿ
ಮೈಚೆಲ್ಲಬೇಕು
ಕನಸಿನ ಸಮುದ್ರ
ನಿರ್ಮಿಸಬೇಕು.
(ಶಂಕರ ದೇವಾಡಿಗ ಕೆಂಚನೂರರ ಭಾವದ ಮೇಲೆ ಸ್ವಲ್ಪ ನನ್ನ ಕೈವಾಡ)
ನಾನು
ಪಾತ್ರದೊಳಗೇ ಹರಿವ
ನೀರು
ಹೊಸತೇನೂ ಎದುರಾಗುತ್ತಿಲ್ಲ
ಅದೇ ಅಡ್ಡ, ಅದೇ ಉದ್ದ
ದಡಗಳಿಗೆ ಹೆದರಿ
ಹರಿದು ಹೋದವರ ಹಾದಿ
ಒಮ್ಮೆ
ಹರಿಯಬೇಕಿದೆ
ದಿಕ್ಕೆಟ್ಟು
ಹೊಸನೆಲವ ಅಪ್ಪುತ್ತ
ದಂಡೆಗಳ ಮೀರುತ್ತ
ಬಂಡೆಗಳ ಸರಿಸುತ್ತ
ಸಮುದ್ರ ಸೇರುವುದೇ ಗುರಿ ಎಂಬುದ
ಮರೆಯಬೇಕು
ಮೀರಿ ಹರಿದಲ್ಲಿ
ಇಂಗಿಹೋದರೂ ಸರಿ
ಸಿಕ್ಕಿ ಒದ್ದಾಡಿದರೂ ಸರಿ
ಒಡಲೊಳಗಿನ ಮೆಕ್ಕಲು ಮಣ್ಣ ಹರಡಿ
ಮೈಚೆಲ್ಲಬೇಕು
ಕನಸಿನ ಸಮುದ್ರ
ನಿರ್ಮಿಸಬೇಕು.
(ಶಂಕರ ದೇವಾಡಿಗ ಕೆಂಚನೂರರ ಭಾವದ ಮೇಲೆ ಸ್ವಲ್ಪ ನನ್ನ ಕೈವಾಡ)
No comments:
Post a Comment