Tuesday 16 July 2013


ಡಾ.ಎಚ್.ಎಸ್ ಅನುಪಮಾ : ಎರಡು ಕವಿತೆಗಳು



1.
ಗಾಳಿಗೆ ಹೊಯ್ದಾಡುವ ಕೂದಲು
ತುಟಿ ಮೇಲಿನ ಮಾಸದ ನಗೆ
ವಿಳಾಸ ತಿಳಿಸದ ಒಂದು ಪಿಸು ಮಾತು
ಮೈಮನಗಳ ಅಕಾರಣ ಖುಷಿ
ಎಲ್ಲದರಲ್ಲೂ 
ಸೂಳೆತನ ಹುಡುಕುವ ಲೋಕವೇ,
ಧಿಕ್ಕಾರ!

ಮೊಳೆವ ಬೀಜ, ಅರಳುವ ಮೊಗ್ಗು
ಚಿಗುರಿದ ಎಳೆ ಗರಿಕೆಯ
ಮೃದು ಸ್ಪರ್ಶ

ನಿನ್ನಲ್ಲಿ ರೋಮಾಂಚನ ಹುಟ್ಟಿಸದೇ ಹೋಗಲಿ..







2.
ಕಣ್ಣು ತುಂಬಿ ನಿಂತ ಬೆಳಕಿನ ಹನಿಯೇ, 
ಕೆಳಗುರುಳಬೇಡ. 
ಇಳಿದು ಬಿಡು ನನ್ನ ಆಳಾಳಕ್ಕೆ; 
ಗಂಟಲಿಗೆ, ನಾಭಿಗೆ, ಅಂತರಾಳದ ಮೂಲಕೆ. 
ದಾಹಿ ಜೀವ ತೇವಗೊಳ್ಳಲಿ. 
ಬಂಡೆಕಲ್ಲಿನಲ್ಲಿ ದೇವರನ್ನೂ, 
ಹೂವಿನಲ್ಲಿ ಅನುಗ್ರಹವನ್ನೂ, 
ಕೆಂಪುಪುಡಿಯಲ್ಲಿ ಪೌರುಷವನ್ನೂ 
ಕುರುಹುಗಳಲ್ಲೇ ಇರವನ್ನು ಅರಸುವ ಲೋಕ 
ತೇವಗೊಂಡು ಹೊಳೆವ ಕಣ್ಣುಗಳಲ್ಲಿ 

ನನ್ನ ನೆಮ್ಮದಿಯ ಮೂಲ ಹುಡುಕಲಿ. 
ಕಣ್ಣಕನ್ನಡಿಯ ಪ್ರತಿಬಿಂಬಕ್ಕೆ ಏನಾದರೂ ಹೆಸರಿಡಲಿ. 


***

4 comments:

  1. ಮಹಿಳಾ ಧ್ವನಿಯ ಅತೀ ರೋಷದ ಅಭಿವ್ಯಕ್ತಿ.....ರೂಪಕಗಳ ಜೊತೆ ಕರುಣೆಯ ಧ್ವನಿಯೂ ಇದೆ ಅನ್ನಿಸಿತು.

    ReplyDelete
    Replies

    1. ಕವಿತೆಗಳೆರಡಕ್ಕೊಂದು ಚಿತ್ರ
      ಬಿಡಿಸಿದ್ದು ನನ್ನ ಮಿತ್ರ
      ಅದ್ಭುತವೆಷ್ಟೀ . . ಇಬ್ಬರ ಕೋನ
      ಉಳಿಸಲೆಂದು ಮಾನವೀಯತೆಯ ಮಾನ
      ಕವಿತಾಚಿತ್ರ , ಕಾಯಲಿ ಲೋಕದ ಹಿತ
      ಎಂದು ಶುಭ ಕೋರುವ ನಾ ..ಸೀತೆಯ ನಾಥ !!!!!.

      Delete
  2. ಹೆಣ್ಣನ್ನು ಹಳದಿ ಕಣ್ಣುಗಳಿ೦ದ ನೋಡುವ, ಹೆಣ್ಣಿನ ಕಣ್ಣ ಬೆಳಕಿನಹನಿಗಳಲ್ಲಿ ಅವಳ ನೆಮ್ಮದಿಯ ಮೂಲವನ್ನು ಹುಡುಕದ ಜಗತ್ತನ್ನು ಧಿಕ್ಕರಿಸುವ ಅನುಪಮಾರವರ ಈ ಕವನಗಳು ಹೆಣ್ಣಿನ ಸ೦ಕೀರ್ಣ ಭಾವಗಳ ಸಶಕ್ತ ಅಭಿವ್ಯಕ್ತಿಯಾಗಿವೆ. olleya ಕವನಗಳನ್ನು ಕೊಟ್ಟ ಅನುಪಮಾರವರಿಗೂ ಅರ್ಥಪೂರ್ಣ ಚಿತ್ರ ಬರೆದ್ ಕಲವಿದ್ ಖ್ರಿಶ್ನ ಅವರಿಗೂ ನನ್ನ ಅಭಿನ೦ದನೆಗಳು.

    ReplyDelete
  3. A correction please:

    olleya kavanagaLannu koTTa Anupamaa ravrigoo arthapoorna chitra bareda kalaavida Krishna avarigoo nanna ab hinandanegalu.

    ReplyDelete