Saturday, 27 July 2013

 ಅರಬ್ ಜಗತ್ತಿನ ಹೆಣ್ಣುಮಕ್ಕಳ ಕವಿತೆಗಳು...  

ಅನುವಾದ: ಎಮ್.ಆರ್  ಕಮಲಾ
Metikurke Ramaswamy Kamala 
 ರವಿಯಾ ಮೊರ್ರಾಳ ಕವಿತೆ 



ಚರ್ಚಿನಂಗಳದ
ಕರಕು ಕೊಂಬೆಗಳಲ್ಲಿ
ಮರೆವನ್ನೇ ಮರೆತ
ಬಾಯಾರಿದ ತುಟಿಗಳಲ್ಲಿ
ಕವಿತೆ
ಮೊಂಡು ಹಿಡಿದು
ಉಳಿದುಕೊಂಡಿದೆ!

ರಾತ್ರಿ..
ಕವಿತೆಯೆದ್ದು ಕೆನೆಯುತ್ತದೆ

ಅಡ್ಡ ರಸ್ತೆಗಳ
ಕಸದ ರಾಶಿಯಲ್ಲಿ
ಕವಿತೆ!
ಸಾಯದೇ ಕವಿಗೆ
ನಿರ್ವಾಹವಿಲ್ಲ

ನನ್ನ ಅಜ್ಜನ ಬಳಿ
ಒಂದು ಕಪ್ ಕಾಫಿ,
ಆಶ್ ಟ್ರೇ, ಹತ್ತಾರು ಮಕ್ಕಳು
ಮತ್ತು
ಒಂದು ರುಮಾಲು..
`ಖುರಾನ್' ಓದುವಾಗ
ಪದಗಳು ಗಂಟಲಲ್ಲಿ ಸಿಕ್ಕಿ
ಮೇಲೆ ನೋಡುತ್ತಾನೆ

ಸುತ್ತೆಲ್ಲ ಎಲೆಗಳು
ನೇತಾಡಲು ಮರಗಳೇ ಇಲ್ಲ!

No comments:

Post a Comment