Friday 26 July 2013


ಕೆಲವು ಲತಸಾಗಳು*                           ಡಾ.ಜಿ.ಕೃಷ್ಣ



1.
 Photo: ತೂಕ ಇಷ್ಟಾದರೂ ಹೆಚ್ಚಿರಲಿ
ಎಂಬ ಬಯಕೆ
ನಿಗಿ ನಿಗಿ ಹೊಳೆಯುವ
ಬೆಚ್ಚಗಿನ
ಕಪ್ಪುಚುಕ್ಕಿಯ ಗುಲಗುಂಜಿ
ಆಳೆತ್ತರದ 
ಕಿವುಡು ತಕ್ಕಡಿ.

ತೂಕ ಇಷ್ಟಾದರೂ ಹೆಚ್ಚಿರಲಿ
ಎಂಬ ಬಯಕೆ
ನಿಗಿ ನಿಗಿ ಹೊಳೆಯುವ
ಬೆಚ್ಚಗಿನ
ಕಪ್ಪುಚುಕ್ಕಿಯ ಗುಲಗುಂಜಿ
ಆಳೆತ್ತರದ
ಕಿವುಡು ತಕ್ಕಡಿ.




  2.

 Photo: ನಾನು
ಚೂರು ಚೂರಾಗಿ
ಜೋಡಿಸಲಾಗದೆ
ಬಿಂಬಕ್ಕೆ ದ್ರೋಹ ಬಗೆಯುವ
ಹರಳಿನ ಕನ್ನಡಿಯಂತಲ್ಲ;
ಕಲಕಿದರೆ
ತಾಳ್ಮೆಯಿಂದ
ತಿಳಿಯಾಗಿ
ನ್ಯಾಯ ಒದಗಿಸುವ
ಜೀವಜಲದ
ವಿಸ್ತಾರ.
















ನಾನು
ಚೂರು ಚೂರಾಗಿ
ಜೋಡಿಸಲಾಗದೆ
ಬಿಂಬಕ್ಕೆ ದ್ರೋಹ ಬಗೆಯುವ
ಹರಳಿನ ಕನ್ನಡಿಯಂತಲ್ಲ;
ಕಲಕಿದರೆ
ತಾಳ್ಮೆಯಿಂದ
ತಿಳಿಯಾಗಿ
ನ್ಯಾಯ ಒದಗಿಸುವ
ಜೀವಜಲದ
ವಿಸ್ತಾರ.


 3.


ಒಂದಷ್ಟು ಹೆಣ್ಣುಮಕ್ಕಳದ್ದಾದರೂ
ಇದ್ದೇ ಇದೆ ಈ ಬಯಕೆ, ಪ್ರಶ್ನೆ
ಇರಬಾರದೇ ಈ
ಗಂಡಸರು
ರಾತ್ರಿಯಲ್ಲೂ
ಹಗಲಿನಂತೆ...




4.

Photo: ತಲೆಯೊಳಗೆ ಮೂಡಿದ್ದು
ಎದೆ
ಅಲ್ಲಿ ಮೂಡಿದ್ದು
ತಲೆ
ಕೆಲವರಿಗೆ ತಾಬಡ ತೋಬ್
ಹಲವರಿಗೆ
ನಿಧಾನ
ಮುಟ್ಟಿಯೆ ಮುಟ್ಟುವುದು
ಆದರೆ
ಲಿಟ್ಮಸ್ ಕಾಗದದಂತೆ
ಬಣ್ಣ
ಬದಲಾವಣೆಯಾಗುವುದು
ಮುಟ್ಟಿದ್ದರ ತಪ್ಪಲ್ಲ. 















ತಲೆಯೊಳಗೆ ಮೂಡಿದ್ದು
ಎದೆ
ಅಲ್ಲಿ ಮೂಡಿದ್ದು
ತಲೆ
ಕೆಲವರಿಗೆ ತಾಬಡ ತೋಬ್
ಹಲವರಿಗೆ
ನಿಧಾನ
ಮುಟ್ಟಿಯೆ ಮುಟ್ಟುವುದು
ಆದರೆ
ಲಿಟ್ಮಸ್ ಕಾಗದದಂತೆ
ಬಣ್ಣ
ಬದಲಾವಣೆಯಾಗುವುದು
ಮುಟ್ಟಿದ್ದರ ತಪ್ಪಲ್ಲ.
*************************************************************************
* ಲಯ ತಪ್ಪಿದ ಸಾಲುಗಳು

1 comment:

  1. ಲಯ ಎಲ್ಲಿ ತಪ್ಪಿದೆ ಅಂತ ಗೊತ್ತಾಗೋದೆ ಇಲ್ಲ ಮರಾಯರೇ
    ಸೂಪರ್ ಇವೆ ಎಲ್ಲವೂ

    ReplyDelete