Thursday, 25 July 2013




ಇಬ್ಬನಿ                                      ನಾಗರಾಜ ಹರಪನಹಳ್ಳಿ
                                                                                                                                                                                                                                      Nagaraj Harapanahalli

ಬದುಕನ್ನ ಆಕಾಶಕ್ಕೆ ಚೆಲ್ಲಿದೆ, ಮೋಡಗಳಾಗಿ ಮಳೆ ಸುರಿಸಿದವು 
ಬದುಕನ್ನ ಭೂಮಿಗೆ ಚೆಲ್ಲಿದೆ, ನದಿಯಾಗಿ ಎರಡುದಡಗಳ ಬೆಸೆಯಿತು 
ಬದುಕನ್ನ ಮನುಷ್ಯರ ಮನೆಯ ಅಂಗಳಕ್ಕೆ ಚೆಲ್ಲಿದೆ, ಮನೆಯೊಳಗೆ ದೀಪ ಮಾಡಿಟ್ಟುಕೊಂಡರು.


***
ಒಲವು ಹದಗೊಂಡು 
ಭೂಮಿ ಪಲ್ಲವಿಸುವ ಸುಳಿವು 
ನೀಡಿದ ಬೆಳಗು 

ಕಣ್ಣೊಳಗಿನ ಒಲವು 
ನದಿಯಾಗಿ ಹರಿದು ಬಿಡಲಿ 
ಬಳುಕುತ್ತಿದೆ ಹೂವ ಎದೆಯು

ಮನದ ಬೆಂಕಿಯನ್ನೆಲ್ಲಾ 
ಪ್ರೇಮ ಕಬಳಿಸಿದ ಘಳಿಗೆ
ಕಳುಹಿಸಿ ಬಿಡು ಕಣ್ಣಸನ್ನೆ. 


***
ನಿನ್ನ ದೇಹದ ಪ್ರತಿ ಜೀವಕೋಶದ 
ಉತ್ಕಟತೆಯನ್ನ ಮೀಸಲಿಡು ನನಗಾಗಿ 
ನಿನ್ನ ಮುಡಿಯ ಪ್ರತಿ ಎಳೆಗೂ ರಾಗಗಳುಂಟು
ಪ್ರತಿ ರಾಗವ ಕಾದಿಡು ನನಗಾಗಿ 
ನಿನ್ನ ಪ್ರತಿ ನಿಟ್ಟುಸಿರುಗಳನ್ನು ಉಲ್ಲಾಸಗೊಳಿಸುವೆ 
ಕಾಲದ ಮಗ್ಗಲಲ್ಲಿ ಕಾದಿಡು ನನಗಾಗಿ
ನಿನ್ನ ದೇಹ ಪ್ರಕೃತಿಯ ಕಣಿವೆಯಲ್ಲಿನ ನೋವುಗಳಿಗೆ
ಪ್ರೀತಿಯ ಮುಲಾಮು ಹಚ್ಚೋಣ ಕಾದಿಡು ನನಗಾಗಿ. 


***

No comments:

Post a Comment